Life’s great hypocritical facts (Kannada)
Most of us talk about the world but ignore our own home. There is a hidden hypocrite in each one of us. Here are some hypocritical facts on Life which may enlighten us not to be a hypocrite.
ನಾನು ಗಮನಿಸಿದ ಕೆಲವು ವಿಚಿತ್ರಗಳು
* ವಿಶ್ವಶಾಂತಿಯ ಬಗ್ಗೆ ಮಾತಾನಾಡುತ್ತೇವೆ, ಆದರೆ ಮನೆಯವರೊಂದಿಗೆ ಕಾದಾಡುತ್ತೇವೆ.
* ಗಂಡ ಹೆಂಡತಿಯ ದುಡಿಮೆ ಹೆಚ್ಚಾಗಿದೆ, ವಿಚ್ಛೇದನಗಳು ಹೆಚ್ಚಾಗಿವೆ.
* ನಾವು ಬಹಿರಂಗದಲ್ಲಿ ಗೆಲ್ಲುತ್ತಿದ್ದೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ.
* ದಂಪತಿಗಳಿಬ್ಬರು ದುಡಿಯುತ್ತಿದ್ದಾರೆ, ಮಗು ಅನಾಥವಾಗಿದೆ.
* ನಾವು ಮುಖ್ಯಮಂತ್ರಿ,ಪ್ರಧಾನಮಂತ್ರಿ, ನಾಯಕ ನಟರನ್ನು ಭೇಟಿಯಾಗಿದ್ದೇವೆ, ಆದರೆ ನಮ್ಮ ನೆರೆಹೊರೆಯವರನ್ನು ಮರೆತ್ತಿದ್ದೇವೆ.
* ಗ್ಯಾರಂಟಿ, ವಾರಂಟಿಗಳಿರುವ ವಸ್ತುಗಳನ್ನು ಖರೀದಿಸುತ್ತಿದ್ದೇವೆ, ನಮ್ಮ ಜೀವಕ್ಕೆ ಗ್ಯಾರಂಟಿವಿಲ್ಲವೆಂಬುದನ್ನು ಮರೆತ್ತಿದ್ದೇವೆ.
* ನೀರು ದೇಹಕ್ಕೆ ಅವಶ್ಯಕ ಅಂತ ಗೊತ್ತಿದ್ದು, ನೀರಿನ ಬದಲು ೨೦೦ಮೀ.ಲಿ ವಿದೇಶಿ ಪಾನೀಯವನ್ನು ಕುಡಿಯುತ್ತೇವೆ..
* ಜೀವನೋಪಾಯ ಮಾರ್ಗ ಅರಿತಿದ್ದೇವೆ, ಜೀವಿಸುವುದು ಹೇಗೆಂಬುದು ಮರೆತಿದ್ದೇವೆ.
* purifier ತಂದು ನೀರನ್ನು ಶುದ್ಧೀಕರಿಸುತ್ತೇವೆ, ನಮ್ಮ ಆತ್ಮವನ್ನು ಮಲಿನಗೊಳಿಸಿದ್ದೇವೆ.
* ಮನೇಲಿ ಎಲ್ಲ ತಿನ್ನಲು ಎಲ್ಲ ತರಹದ ತಿಂಡಿಗಳಿವೆ, ಆದರೆ ತಿನ್ನದೇ ಇರುವಂತಹ ಬಿಪಿ,ಡಯಾಬಿಟಿಸ್, ಖಾಯಿಲೆಗೆ ತುತ್ತಾಗುತ್ತಿದ್ದೇವೆ.
* ದುಡ್ಡನ್ನು ಗಳಿಸುವ ಭರದಲ್ಲಿ, ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ .
* ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ, ಮನುಷ್ಯರನ್ನು,ಸ್ನೇಹಿತರನ್ನು ಉಪಯೋಗಿಸುತ್ತಿದ್ದೇವೆ ಮತ್ತು ಖರೀದಿಸುತ್ತಿದ್ದೇವೆ.
* ನಮ್ಮ ಮನೆಗಳು ದೊಡ್ಡದಾಗುತ್ತೀವೆ, ಕುಟುಂಬ ಚಿಕ್ಕದಾಗುತಿದೆ.
* ಕೊಲ್ಲೂರು ಮೂಕಾಂಬಿಕೆಗೆ ರೇಷ್ಮೆ ಸೀರೆ ಉಡಿಸುತ್ತೇವೆ, ಮನೇಲಿರೋ ಸ್ವಂತ ತಾಯಿಗೆ ಹರಕು ಸೀರೆ ಹಾಕುತ್ತಿದ್ದೇವೆ.
* ಕಾನ್ವೆಂಟ್ ಶಿಕ್ಷಣ ಬಯಸಿ,ಸರಕಾರಿ ನೌಕರಿ ನಿರೀಕ್ಷಿಸುತ್ತಿದ್ದೇವೆ.
* ಡಾಕ್ಟರ್ ಗಳು ಜಾಸ್ತಿಯಾಗಿದ್ದು, ರೋಗಿಗಳು ಕಡಿಮೆಯಾಗಿದ್ದಾರೆ.
* ಯೋಗ ಮಾಡೋಕೆ ೨೫೦ಕೋಟಿ ಖರ್ಚು ಮಾಡ್ತಾರೆ, ರೈತರಿಗೆ ಒಂದು ಲಕ್ಷ ಪರಿಹಾರ ಕೊಡ್ತಾರೆ.
* ಆರ್ಡರ್ ಮಾಡಿದ ಪಿಜ್ಜಾ ಬೇಗ ಬರುತ್ತೆ, ಕಂಪ್ಲೇಂಟ್ ಕೊಟ್ಟ ಪೋಲಿಸರು ನಿಧಾನವಾಗಿ ಬರ್ತಾರೆ.
* ಕನ್ನಡದ ಪರ ಹೋರಾಟ ನಡೆಸುತ್ತಾರೆ, ತಮ್ಮ ಮಕ್ಕಳನ್ನು ಕಾನ್ವೆಂಟಿಗೆ ಸೇರಿಸ್ತಾರೆ.
* ಪ್ರತಿಭಾವಂತರು ಖಾಸಗಿ ಕೆಲಸದಲ್ಲಿದ್ದು ಮತ್ತು ನಿರುದ್ಯೋಗಿಗಳಾಗಿದ್ದು, ಪ್ರತಿಭೆ ಇಲ್ಲದವರು ಸರಕಾರಿ ನೌಕರಿಯಲ್ಲಿದ್ದಾರೆ.
* ಪ್ರತಿಭಾ ಕಾರಂಜಿ,ಪುಟಾಣಿ ವಿಜ್ಞಾನ ಪರೀಕ್ಷೆ ನಡೆಸುತ್ತಾರೆ, ಪ್ರತಿಭೆಯಿಲ್ಲದ ಅಜ್ಞಾನಿಗಳಿಗೆ ಮೆಡಲ್ ಕೊಡುತ್ತಾರೆ.
* ದುಡ್ಡಿರೋರಿಗೆ ದೇವಸ್ಥಾನದಲ್ಲಿ ಮೊದಲ ಪ್ರವೇಶ, ಭಕ್ತಿಯಿಂದ ಬಂದವರಿಗೆ ಕೊನೆಯ ಪ್ರವೇಶ!
Get Connected: